Friday, 25 January 2019

Current politics in my view

ನಾ ಕಂಡಂತೆ ಇಂದಿನ ರಾಜಕಾರಣ :
ಶುರುಮಾಡುವ ಮೊದಲು: "ಕಮಲಕೆಸರಿನಿಂದ ಮೇಲೇಳುವ ಬದಲುಕೆಸರಿನೊಳಕ್ಕೇ ಹೊರಟಿದೆ...!

ತೆನೆಹೊತ್ತ ನಾರಿತೆನೆಯನ್ನು ಕೆಳಗಿಟ್ಟು ತಿಂಗಳುಗಳೇ ಕಳೆದಿವೆ ತೆನೆಹೊತ್ತ ನಾರಿಪ್ರಾದೇಶಿಕವಾದ ತನ್ನ ಹೊರೆಯನ್ನು ರಾಷ್ಟ್ರೀಯವಾದ "ಕೈ"ಗಳಿಗೆ ಕೊಟ್ಟಿದೆಇತ್ತಕರ್ನಾಟಕದ ಕಮಲ 'ಗುರುಗ್ರಾಮ'ದಲ್ಲಿ ಮತ್ತೊಮ್ಮೆ ಅರಳುವ ಪ್ರಯತ್ನ ಮಾಡಿದೆಇಲ್ಲಿನ "ಕೈ" ಕಾಲುಗಳು ರೆಸಾರ್ಟ್ ನತ್ತ ಹೆಜ್ಜೆ ಹಾಕಿವೆತೆನೆ ಕೆಳಗಿಟ್ಟ ನಾರಿಯಂತೂತನ್ನ ಪಾಲಿನ ರೆಸಾರ್ಟ್ ಭಾಗ್ಯ ಯಾವಾಗ ಬರುತ್ತದೋ ಎಂದು ಕಾದು ಕುಳಿತಿದೆಎಂದಿನಂತೆ, 'ಕಮಲ' ಬೆಳೆಗಾರರು 'ಸ್ಥಳೀಯ ಕೃಷಿ'ಯನ್ನು ಮರೆತು, 'ರಾಷ್ಟ್ರೀಯಕೃಷಿ' ಬಗ್ಗೆ ಕನಸು ಕಾಣುತ್ತಿದ್ದಾರೆಮತ್ತೊಂದೆಡೆಕಾಲಿಲ್ಲದ 'ಕೈ'ಗಳು, 'ಆನೆ'ಯದೋ, 'ಸೈಕಲ್'ದೋ ಸಹಾಯ ಕೇಳಿ 'ಮಹಾಘಟಎಂಬ ಬಂಧನದಲ್ಲಿ ಸಿಲುಕಿದೆತೆನೆಹೊತ್ತ ನಾರಿಯಂತೂ ಇಲ್ಲಿನ ಬರಗಾಲ ಮರೆತು ಕೋಲ್ಕತ್ತಾದಲ್ಲಿ ರಚಿತವಾಗುತ್ತಿರುವ 'ಮಹಾ ಘಟ'ಕ್ಕೆ ತನ್ನದೂ ಒಂದು ಚಂಬು ನೀರು ಹಾಕಿ ಬಂದಿದೆ.
'ಕಮಲ' ಬೆಳೆಗಾರರು ಒಬ್ಬ 'ಮೋಡಿಮಾಡುವ ಮಾಂತ್ರಿಕನನ್ನೋ , ಇಲ್ಲ ಇನ್ನೊಬ್ಬ 'ಚಾಣಕ್ಯ'ನನ್ನೋ ನಂಬಿ ಕುಳಿತಿದ್ದಾರೆಇನ್ನು, "ಕೈ"ಗಳಿಗಂತೂತನ್ನ ತಲೆಯ ಮೇಲೆ"ರಾಹು"ವೇ ಕುಳಿತಂತಾಗಿದೆಒಂದೇ ಕುಟುಂಬದಿಂದ ಪೋಷಿಸಲ್ಪಡುತ್ತಿರುವ 'ತೆನೆಹೊತ್ತನಾರಿ ತಾನು 'ಕೈಹಿಡಿದವರಿಂದ ಕಷ್ಟ ಪಡುತ್ತಿದ್ದಾಳೆ....!
 ಒಟ್ಟಿನಲ್ಲಿ ಕನ್ನಡಿಗ "ಕನ್ಫ್ಯೂಸ್" ಆಗಿದ್ದರೆ, ಭಾರತೀಯ "ಭ್ರಾಂತ"ನಾಗಿದ್ದಾನೆ....!!!
 .ನಾ.ಮಾಧವ ಭಟ್

No comments:

Post a Comment