ಉತ್ತಿಷ್ಠ ಯುವ ಭಾರತ : ರಾಷ್ಟ್ರೀಯ ಯುವ ದಿನ - ಜನವರಿ ೧೨
ವಿಶ್ವ ವಿಜೇತ ಯುವ ಸನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಭಾರತ 'ರಾಷ್ಟ್ರೀಯ ಯುವ ದಿನ'ವನ್ನಾಗಿ ಸಂಭ್ರಮಿಸುತ್ತಿದೆ (೧೯೮೫ರಿಂದ). ಇಂದು ಭಾರತದಜನಸಂಖ್ಯೆಯಲ್ಲಿ ೫೦%ಕ್ಕೂ ಹೆಚ್ಚು ಭಾಗ ೨೫ ವರ್ಷಗಳಿಗಿಂತ ಚಿಕ್ಕವರು ಮತ್ತು ೬೫%ಕ್ಕೂ ಹೆಚ್ಚು ಭಾಗ ೩೫ ವರ್ಷಗಳನ್ನು ದಾಟದವರು. ಅಧ್ಯಯನಗಳ ಪ್ರಕಾರ ೨೦೨೦ರವೇಳೆಗೆ ಭಾರತೀಯರ ಸರಾಸರಿ ವಯಸ್ಸು ೨೯. ಇದು ಇತರ ದೇಶಗಳಿಗಿಂತ ಬಹು ಕಡಿಮೆ. ಹಾಗಾಗಿಯೇ ಭಾರತ ನಿಜವಾಗಿಯೂ ಒಂದು 'ಯುವ ರಾಷ್ಟ್ರ'. ಹೀಗೆ ಜನಸಂಖ್ಯೆಒಂದು ಶಾಪವಾಗದೆ ನಮ್ಮ ಸಂಪನ್ಮೂಲವಾಗಿ ನಮ್ಮನ್ನು ಯುವ ರಾಷ್ಟ್ರವನ್ನಾಗಿ ಮಾಡಿದೆ. ಭಾರತೀಯ ಯುವಕರು ತಮ್ಮ ಜೀವನವನ್ನು ಕಟ್ಟಿಕೊಳ್ಳುವುದರ ಜೊತೆಜೊತೆಗೆ ರಾಷ್ಟ್ರವನ್ನು ಕಟ್ಟಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಸರ್ಕಾರಗಳ ಅನೇಕ ಯೋಜನೆಗಳ ಪರಿಣಾಮವಾಗಿ ಶಿಕ್ಷಣ, ಆಹಾರ, ವಸತಿ, ಉದ್ಯೋಗ, ಆರೋಗ್ಯ ಹೀಗೆಅನೇಕ ಭಾಗಗಳಲ್ಲಿ ಭಾರತ ಸುಧಾರಿಸಿದೆ. ಆದರೂ ಭ್ರಷ್ಟಾಚಾರ, ನಿರುದ್ಯೋಗ, ಸ್ವಜನ ಪಕ್ಷಪಾತ ಹೀಗೆ ಅನೇಕ ಸಮಸ್ಯೆಗಳು ಇಂದಿಗೂ ಇವೆ. ಈ ಸಮಸ್ಯೆಗಳಿಗೆ ಸರ್ಕಾರಗಳುಎಂದಿಗೂ ಪರಿಹಾರವನ್ನು ಕೊಡಲಾರವು. ಏಕೆಂದರೆ, 'ಸರ್ಕಾರ' ಎಂಬುದು ಒಂದು ವ್ಯವಸ್ಥೆ. ವ್ಯವಸ್ಥೆಗಳು ವ್ಯಕ್ತಿಗಳಿಂದ ನಿರ್ಮಾಣವಾಗುತ್ತವೆ. ಹಾಗಾಗಿ ವ್ಯಕ್ತಿ ಸರಿಯಾದರೆಮಾತ್ರ ವ್ಯವಸ್ಥೆ ಸರಿಯಾಗುತ್ತದೆ. ಇಂದಿನ ಯುವಕರು ಈ ದಿಶೆಯಲ್ಲಿ ಚಿಂತಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಯುವ ಭಾರತೀಯರು ಚಿಂತಿಸಬೇಕಾದ ಅಂಶಗಳು ಇಲ್ಲಿವೆ:
ಒಬ್ಬ ವ್ಯಕ್ತಿಯಾಗಿ:
- ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು.
- ಕೇವಲ ಫೇಸ್ ಬುಕ್, ವಾಟ್ಸಾಪ್, ಆನ್ಲೈನ್ ಪೋರ್ಟಲ್ ಗಳಿಗೆ ಮಾರಿಹೋಗದೆ, ಸಮಯವನ್ನು ಸದುಪಯೋಗಪಡಿಸಿಕೊಳ್ಳುವುದು.
- ರಾಷ್ಟ್ರೀಯ ಚಿಂತನೆ, ಸುದ್ದಿ ಗೋಷ್ಠಿಗಳಲ್ಲಿ ಭಾಗವಹಿಸುವಿದು.
- ಸಂಸ್ಕೃತಿ, ಆಚರಣೆಗಳನ್ನು ಹಿಂದಿನವರಿಂದ ಮುಂದಿನವರಿಗೆ ದಾಟಿಸುವಿದು.
ಒಬ್ಬ ಪ್ರಜೆಯಾಗಿ:
- ಸರ್ಕಾರಗಳ ಯೋಜನೆಗಳ ಬಗ್ಗೆ ಚರ್ಚಿಯುವುದು.
- ತಾತ್ಕಾಲಿಕ ಯೋಜನೆಗಳಿಗಿಂತ, ದೀರ್ಘಕಾಲಿಕ ಯೋಜನೆಗಳಿಗಾಗಿ ಸರ್ಕಾರಗಳನ್ನು ಆಗ್ರಹಿಸುವುದು.
- ಭ್ರಷ್ಟಾಚಾರವನ್ನು ದೈನಂದಿನ ವ್ಯವಹಾರದಲ್ಲಿ ತಡೆಹಿಡಿಯುವುದು.
- ನಾಡು-ನುಡಿ-ಭಾಷೆ ಇತ್ಯಾದಿ ಅಂಶಗಳು ದೇಶದ ವಿಭಜನೆಯ ವಿಷಯಗಳಾಗದೇ, ದೇಶದ ಐಕ್ಯತೆಯ ವಿಷಯಗಳೆಂದು ಅರಿತುಕೊಳ್ಳುವುದು.
- ರಾಷ್ಟ್ರ ವಿರೋಧಿ ಪಟ್ಟಭದ್ರ ಹಿತಾಸಕ್ತಿಗಳನ್ನು ವಿರೋಧಿಸುವುದು.
ಹೀಗೆ ಯುವ ಭಾರತದ ಭಾಗವಾದ ನಾವು ಕನಸಿನಲ್ಲೂ ಭಾರತವನ್ನು ಕಾಣಬೇಕಾಗಿದೆ. ಈ ದಿಶೆಯಲ್ಲಿ ನಾವು ಯುವದಿನವನ್ನು ಸಂಭ್ರಮಿಸೋಣ - ಭಾರತವನ್ನುವಿಶ್ವಗುರುವನ್ನಾಗಿ ಮಾಡೋಣ.
ಹ.ನಾ.ಮಾಧವ ಭಟ್
ಪುಷ್ಯ-ಶುಕ್ಲ-ಷಷ್ಠಿ, ಶನಿವಾರ.
೧೨-೦೧-೨೦೧೯
No comments:
Post a Comment