Friday, 25 January 2019

Learnings from my daughter

ನನ್ನ ಆರು ತಿಂಗಳ ಮಗಳಿಂದ ನಾನು ಕಲಿತ ಆರು ಅಂಶಗಳು.

ನನ್ನ ಮಗಳು 'ವಿದಿತಾಇಂದಿಗೆ ಆರು ತಿಂಗಳು ಪೂರೈಸಿದ್ದಾಳೆ....!! ಚಿಕ್ಕ ಮಕ್ಕಳೇ ಚೆಂದಅವು ನಮ್ಮ ಜೊತೆಗಿದ್ದರೂ ಅವುಗಳದೇ ಲೋಕದಲ್ಲಿ ಇರುತ್ತವೆ. 'ಮಕ್ಕಳ ಲೋಕನಾವು ಈಗ ಮರಳಿ ಹೋಗಲಾಗದ ಒಂದು ಲೋಕಮಕ್ಕಳನ್ನು ಬೆಳೆಸುವುದು ಒಂದು ಜವಾಬ್ದಾರಿಯಾದರೂಅವುಗಳ ಬೆಳವಣಿಗೆಯನ್ನು ಗಮನಿಸುವುದೇ ಒಂದು ಆನಂದಮಕ್ಕಳು ದಿನದಿಂದ ದಿನಕ್ಕೆ ಹೊಸತನ್ನು ಕಲಿಯುತ್ತವೆ ಮತ್ತು ಬೆಳೆಯುತ್ತವೆನನ್ನ ಮಗಳೂ ಬೆಳೆಯುತ್ತಿದ್ದಾಳೆ - ಈಗ ಆರು ತಿಂಗಳು ಪೂರೈಸಿದ್ದಾಳೆ...! ನಾವು ಅವಳಬೆಳವಣಿಗೆಯನ್ನು ಸಂತೋಷಿಸುತ್ತಿದ್ದೇವೆಮಗಳಿಗೆ ಆರು ತಿಂಗಳು ತುಂಬಿದ  ಸಂದರ್ಭದಲ್ಲಿ ನಾನು ಗಮನಿಸಿದ ಆರು ಅಂಶಗಳನ್ನು ಹಂಚಿಕೊಳ್ಳುತ್ತೇನೆ.
ನಗು:- 'ಸಂತೋಷಮಾನವನಿಗಾಗುವ ಒಂದು ಅನುಭವ - 'ನಗುಅದರ ಅಭಿವ್ಯಕ್ತಿಮಕ್ಕಳಲ್ಲಿ ನಗು ಅತ್ಯಂತ ಸಹಜವಾಗಿರುತ್ತದೆದೊಡ್ಡವರಲ್ಲಿ ನಗು ಯಾವಾಗಲು'ಸಹಜಎಂದೆನಿಸುವುದಿಲ್ಲನಾವು ಹಲವು ಬಾರಿ ನಗುವನ್ನು ಹಿಡಿದಿಟ್ಟುಕೊಳ್ಳುತ್ತೇವೆ ಅಥವಾ ಸುಮ್ಮನೆ ಒಂದು 'ಸ್ಮೈಲ್ಕೊಡುತ್ತೇವೆದೊಡ್ಡವರ ನಗು ಅವರಿಗಾದಅನುಭವವಾಗಿರದೆ ಎದುರು ನಿಂತಿರುವ ವ್ಯಕ್ತಿಗೆ ಕೊಡುವ ಪ್ರತಿಕ್ರಿಯೆಯಾಗಿರುವ ಸಂದರ್ಭವೇ ಹೆಚ್ಚು.
 ಅಳು:- 'ಅಳುಕೂಡ ಒಂದು ಅಭಿವ್ಯಕ್ತಿಮಕ್ಕಳು ಅಳುವನ್ನು ಒಂದು ಸಂಪರ್ಕ ಸಾಧನವನ್ನಾಗಿ ಬಳಸುತ್ತವೆಹಾಲು ಬೇಕಾದರೂ ಅಳುತ್ತವೆನಿದ್ದೆ ಬಂದರೂ ಅಳುತ್ತವೆಹೆದರಿಕೆಯಾದರೂ ಅಳುತ್ತವೆ ಅಳುವಿನ ಮರ್ಮವನ್ನು ಅರಿಯಬೇಕಾದ್ದು ಪೋಷಕರ ಕರ್ತವ್ಯ..! ಇಲ್ಲಿ ಇನ್ನೂ ಒಂದು ಅಂಶವನ್ನು ಗಮನಿಸಬಹುದುಮಕ್ಕಳುಜೋರಾಗಿ ನಗುವುದಿಲ್ಲಆದರೆ ಜೋರಾಗಿ ಅಳುತ್ತವೆಇದು ಮನುಷ್ಯನ ಸಹಜ ಸ್ವಭಾವವೆನಿಸುತ್ತದೆ - ಮನುಷ್ಯ ತನ್ನ ಸಂತೋಷಕ್ಕಿಂತ ದುಖ್ಖದ 'ವ್ಯಾಖ್ಯಾನಮಾಡುವುದೇಹೆಚ್ಚು. ...! ಅಲ್ಲವೇ?!
 ನಿದ್ದೆ:- ನಿದ್ದೆ ಮಾನವನ ದೇಹದ ಆವಶ್ಯಕತೆಹಾಗಾಗಿ ಅವಶ್ಯವಿರುವಷ್ಟೇ ನಿದ್ದೆ ಮಾಡಬೇಕುಬೇರೆ ಏನೂ ಕೆಲಸವಿಲ್ಲದ ಮಕ್ಕಳು ಹೆಚ್ಚು ನಿದ್ದೆ ಮಾಡಿದರೂ ಕೂಡನಿದ್ದೆ ಬಾರದೇ ಇದ್ದಾಗ ಹಾಸಿಗೆಯಲ್ಲಿ ಇರಲು ಇಷ್ಟಪಡುವುದಿಲ್ಲನಿದ್ದೆ ಬಾರದೆ ಇದ್ದಾಗ - ಹಾಸಿಗೆಯಲ್ಲೇ ನಗುತ್ತವೆಅಳುತ್ತವೆಆಟವಾಡುತ್ತವೆಆದರೆ ದೊಡ್ಡವರ ಹಾಗೆನಿದ್ದೆಯ 'ನಾಟಕ'ವಾಡುವುದಿಲ್ಲ...!
 ವಸ್ತುಗಳ ಮೌಲ್ಯ:- ವಸ್ತುಗಳ 'ಮೌಲ್ಯ'ವನ್ನು ಅವುಗಳ ದುಡ್ಡಿನ 'ಬೆಲೆ'ಯಿಂದ ಅಳೆಯುವ ಸ್ವಭಾವ ದೊಡ್ಡವರದುಮಕ್ಕಳು ಹಾಗಲ್ಲಅವು  ವಸ್ತುತನಗೆಷ್ಟರಮಟ್ಟಿಗೆ ಪ್ರಯೋಜನವೆಂದು ನೋಡುತ್ತವೆಹತ್ತು ರೂಪಾಯಿಯ ಆಟದ ಸಾಮಾನು ಸಾವಿರ ರೂಪಾಯಿಯ ಆಟದ ಸಾಮನಿಗಿಂತ ಹೆಚ್ಚು ಹಿಡಿಸಬಹುದು.
 ಗ್ರಹಣಶೀಲತೆ:- ಮಕ್ಕಳು ನಿತ್ಯವೂ ಬೆಳೆಯುತ್ತವೆ ಏಕೆಂದರೆ ಅವು ಹೊಸತನ್ನು ಗಮನಿಸುತ್ತವೆ ಮತ್ತು ಗ್ರಹಿಸುತ್ತವೆನಾವು ದೊಡ್ಡವರು - ಅನೇಕ ಸಂಗತಿಗಳನ್ನುನೋಡುತ್ತೇವೆಆದರೆ ಗ್ರಹಿಸುವುದಿಲ್ಲಹಾಗಾಗಿಯೇ ದೊಡ್ಡವರ ಬೆಳವಣಿಗೆ ಅನೇಕರಲ್ಲಿ 'ವಯಸ್ಸಿನಬೆಳವಣಿಗೆಗಷ್ಟೇ ಸೀಮಿತ...! 
ಹಸಿವಾದರಷ್ಟೇ ಆಹಾರ:- ಮಕ್ಕಳು ತಮಗೆ ಹಸಿವಾದರಷ್ಟೇ ಹಾಲು ಕುಡಿಯುತ್ತವೆಹಸಿವಿಲ್ಲವಾದರೆ ಸುತಾರಾಂ ಮುಟ್ಟುವುದಿಲ್ಲಆದರೆ ದೊಡ್ಡವರಿಗೆ ಆಹಾರಸೇವಿಸಲು ಹಸಿವೇ ಆಗಬೇಕೆಂದಿಲ್ಲ..! ಅನೇಕ ಬಾರಿ ಸ್ನೇಹಿತರುಸಹೋದ್ಯೋಗಿಗಳು ಕರೆದರೆಂದು ಹೋಟೆಲ್ಲಿಗೆ ಹೋಗಿ ಗಡದ್ದಾಗಿ ತಿನ್ನುತ್ತೇವೆಊಟದಸಮಯವಾಯಿತೆಂದರೆ ಊಟದ ಶಾಸ್ತ್ರ ಮುಗಿಸಿಬಿಡುತ್ತೇವೆ..! ನಮ್ಮ ನಿತ್ಯದ ಊಟದ ಸಮಯದಲ್ಲಿ 'ಮೀಟಿಂಗ್ಇದೆಯಾದರೆ ಒಂದು ಘಂಟೆ ಮೊದಲೇ ಊಟಮುಗಿಸುತ್ತೇವೆ..! ಒಟ್ಟಿನಲ್ಲಿ ಊಟ ಮಾಡುತ್ತೇವೆ...!!
 ಮುಗಿಸುವ ಮುನ್ನನಾವು ಕೂಡ ಮಗುವಾಗಿದ್ದಾಗ 'ಸಹಜ ಧರ್ಮ'ವನ್ನು ಪಾಲಿಸುತ್ತಿದ್ದೆವುದೊಡ್ಡವರಾಗುತ್ತಾ 'ಅಸಹಜತೆಕಡೆಗೆ ಹೋಗುತ್ತೇವೆಅಥವಾ ಅಸಹಜತೆ ಕಡೆಗೆಹೋಗುವುದನ್ನೇ 'ದೊಡ್ಡವರಾಗುವುದುಎನ್ನುತ್ತೇವೆಒಟ್ಟಿನಲ್ಲಿ ಸಹಜ ಜೀವನ ಮಕ್ಕಳಿಂದ ಕಲಿಯಬೇಕಾದ ಪಾಠಪುನಃ ಮಗುವಾಗಿ ಮಕ್ಕಳ ಲೋಕಕ್ಕೆ ಹೋಗಲುಆಗದಿದ್ದರೂಸಹಜತೆಯ ಕಡೆಗೆ ಹೋಗಲು ಪ್ರಯತ್ನಿಸಬೇಕಾಗಿದೆ.
 .ನಾ.ಮಾಧವ ಭಟ್
ಪುಷ್ಯ-ಶುಕ್ಲ-ಏಕಾದಶೀಗುರುವಾರ.
೧೭-೦೧-೨೦೧೯.

No comments:

Post a Comment