Friday, 25 January 2019

Prabodhinee Gurukula : an appeal

ಪ್ರಬೋಧಿನೀ ಗುರುಕುಲ : ಅರ್ಧ ಮಂಡಲೋತ್ಸವ ವರ್ಷ೨೦೧೯-೨೦೨೦.
ಇಂದು ಭಾರತ ನಿಜಾರ್ಥದಲ್ಲಿ ಪ್ರಕಾಶಿಸುತ್ತಿದೆಭಾರತದ ವೇದಯೋಗಸಂಸ್ಕೃತಆಯುರ್ವೇದ ಇತ್ಯಾದಿಗಳು ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಆರಾಧಿಸಲ್ಪಡುತ್ತಿವೆಇದೇಕಾರಣದಿಂದಾಗಿ ನಮ್ಮ ಜವಾಬ್ದಾರಿ ಹೆಚ್ಚಿದೆಜಗತ್ತಿಗೆ ಗುರುವಾಗಿದ್ದ ಭಾರತವನ್ನು ಮತ್ತೊಮ್ಮೆ 'ಗುರು'ವಾಗಿ ಮಾಡಬೇಕಾದ ಹೊಣೆ ನಮ್ಮದುಇದು ನಮ್ಮ ಶಿಕ್ಷಣವ್ಯವಸ್ಥೆಯಿಂದ ಮಾತ್ರ ಸಾಧ್ಯಆತಂಕಕಾರಿ ವಿಷಯವೆಂದರೆ ಅತೀವ ಧಾವಂತಿಕೆಯ ಪರಿಣಾಮವಾಗಿ ನಾವು ಶಿಕ್ಷಣವನ್ನು ಕೇವಲ ಮಾಹಿತಿಗಾಗಿ ಸೀಮಿತಗೊಳಿಸಿಸ್ಪರ್ಧಾತ್ಮಕ ಜಗತ್ತನ್ನು ರೂಪಿಸಹೊರಟಿದ್ದೇವೆಹೀಗಾಗಿ 'ಮಾಹಿತಿಆಧಾರಿತ ಶಿಕ್ಷಣವನ್ನು 'ಮೌಲ್ಯಆಧಾರಿತ ಶಿಕ್ಷಣವಾಗಿ ಪುನಃ ಬದಲಿಸಬೇಕಿದೆ ಹಿನ್ನೆಲೆಯಲ್ಲಿಗುರುಕುಲಗಳ ಪರಿಕಲ್ಪನೆ ಮೌಲ್ಯಾಧಾರಿತ ಶಿಕ್ಷಣಕ್ಕೊಂದು ಬುನಾದಿಶಿಕ್ಷಣದಲ್ಲಿ ಭಾರತೀಯತೆಯನ್ನು ತರುವುದೇ  ಗುರುಕುಲಗಳ ಉದ್ದೇಶಇಂತಹ ಗುರುಕುಲಗಳಲ್ಲಿಚಿಕ್ಕಮಗಳೂರು ಜಿಲ್ಲೆಯಕೊಪ್ಪ ತಾಲೂಕಿನ ಹರಿಹರಪುರದ 'ಪ್ರಬೋಧಿನೀ ಗುರುಕುಲಕಳೆದ ೨೪ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆಪ್ರತಿ ವರ್ಷ ಹತ್ತು ವರ್ಷಪೂರೈಸಿದ ೧೫ರಿಂದ ೨೦ ಮಕ್ಕಳನ್ನು ಸೇರ್ಪಡಿಸಿಕೊಂಡು  ವರ್ಷಗಳ 'ಅಧಿಶೀಲ' (ಪ್ರಾಥಮಿಕಹಾಗೂ ಮತ್ತೆ  ವರ್ಷಗಳ 'ಅಧಿಪ್ರಜ್ಞ' (ಉನ್ನತಶಿಕ್ಷಣವನ್ನುನೀಡಲಾಗುತ್ತಿದೆವೇದಸಂಸ್ಕೃತಯೋಗವೂ ಸೇರಿದಂತೆ ಇಂದಿನ ಆಧುನಿಕ ಶಿಕ್ಷಣವನ್ನು ಸನಾತನ ಭಾರತೀಯ ಸಂಸ್ಕೃತಿಯ ಆಧಾರದ ಮೇಲೆ ನೀಡುವುದೇ ಗುರುಕುಲದ ವೈಶಿಷ್ಟ್ಯಕಾರ್ಯ ಯೋಜನೆಯ ದೃಷ್ಟಿಯಿಂದ  ವ್ಯವಸ್ಥೆಯನ್ನು ವೇದವಿಜ್ಞಾನ (ಇಂದಿನ ಆಧಿನಿಕ ಶಿಕ್ಷಣ), ಯೋಗಕೃಷಿ ಮತ್ತು ಕಲಾ ಕೌಶಲವೆಂಬ'ಪಂಚ ಮುಖಿಶಿಕ್ಷಣ ವ್ಯವಸ್ಥೆಯ ಪರಿಕಲ್ಪನೆಯಲ್ಲಿ ರೂಪಿಸಲಾಗಿದೆಇಲ್ಲಿ ಶಿಕ್ಷಣವನ್ನು ಪೂರೈಸಿದ ಮಕ್ಕಳು ಸಮಾಜದ ಬೇರೆ ಬೇರೆ ಸ್ತರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅರ್ಧ ಮಂಡಲೋತ್ಸವ ವರ್ಷ೨೦೧೯-೨೦೨೦.
ನಮ್ಮ ಪರಂಪರೆಯಲ್ಲಿ ೪೮ರ ಗಣಮಾನವನ್ನು ಒಂದು 'ಮಂಡಲ'ವೆಂದು ಪರಿಗಣಿಸಲಾಗುತ್ತದೆಹಾಗಾಗಿ೨೪ ವರ್ಷಗಳನ್ನು ಪೂರೈಸಿದ ನಮ್ಮ ಗುರುಕುಲ 'ಅರ್ಧಮಂಡಲೋತ್ಸವ'ವನ್ನು ಆಚರಿಸಿಕೊಳ್ಳುತ್ತಿದೆ ಹಿನ್ನೆಲೆಯಲ್ಲಿ ನಮ್ಮ ಶಿಕ್ಷಣದ ಆಧಾರ ಸ್ತoಭಗಳೆನಿಸಿದ ವೇದಯೋಗಸಂಸ್ಕೃತಸಾವಯವ ಕೃಷಿಗಳಿಗೆ ಸಂಬಂಧಿಸಿದವಿಚಾರ ಸಂಕಿರಣಗಳನ್ನು ಏರ್ಪಡಿಸಿ ತನ್ಮೂಲಕ ಗುರುಕುಲವನ್ನುಸಮಾಜಕ್ಕೆ ಇನ್ನಷ್ಟು ಪರಿಚಯಿಸುವ ಉದ್ದೇಶ ನಮ್ಮದು ಮೂಲಕ ನಮ್ಮ ಭಾರತೀಯ ಶಿಕ್ಷಣದಅವಶ್ಯಕತೆಯನ್ನು ಹಾಗೂ ಶಿಕ್ಷಣದಲ್ಲಿ ಭಾರತೀಯತೆಯ ಅವಶ್ಯಕತೆಯನ್ನು ಸಮಾಜಕ್ಕೆ ನಿರೂಪಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.
 ಗುರುಕುಲದ ಪರಿಕಲ್ಪನೆಯಲ್ಲಿ ಪ್ರಾಥಮಿಕ ಅವಶ್ಯಕತೆಗಳಾದ ಆಹಾರವಸತಿವಿದ್ಯೆಔಷಧಿಗಳು ವಾಣಿಜ್ಯದ ವ್ಯಾಪ್ತಿಗೆ ಒಳಪಡುವುದಿಲ್ಲಹಾಗಾಗಿ ಇವೆಲ್ಲವೂ ಇಲ್ಲಿಸಂಪೂರ್ಣ ಉಚಿತ (ಆದರೆ ಇಂದು ಇದೇ ಪ್ರಾಥಮಿಕ ಅವಶ್ಯಕತೆಗಳು ಸಮಾಜದಲ್ಲಿ ವ್ಯಾಪಾರದ ಕೇಂದ್ರಗಳಾಗಿ ಮಾರ್ಪಟ್ಟಿರುವುದು ಒಂದು ವಿಪರ್ಯಾಸ).  ವ್ಯವಸ್ಥೆಗಳಯೋಜನೆಗಳಿಗೆ ಸಮಾಜವೇ ಗುರುಕುಲದ ಪೋಷಣೆಗೆ ಸಹಕರಿಸಬೇಕಾಗಿದೆಸಮಾಜದ ಜವಾಬ್ದಾರಿಯುತ ಭಾಗವಾದ ತಾವು ಗುರುಕುಲದ ಪೋಷಣೆಯ ನಿಮಿತ್ತ ತನು-ಮನ-ಧನ ರೂಪವಾಗಿ ಫಾಲ್ಗೊಳ್ಳಬೇಕೆಂದು ಗುರುಕುಲದ ಪೂರ್ವ ಛಾತ್ರನಾಗಿ (ಹಳೆ ವಿದ್ಯಾರ್ಥಿನಾನು ಇಚ್ಚಿಸುತ್ತೇನೆಧನ್ಯವಾದಗಳು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಅಂತರ್ಜಾಲ:  http://prabodhinigurukula.org/ 
ಯೂ ಟ್ಯೂಬ್1https://www.youtube.com/watch?v=GbAV-CtpgbI
                             2. https://www.youtube.com/watch?v=L4T_obwcDq8

ಇಂತಿ,
ಸದಾ ನಿಮ್ಮವ,
.ನಾ.ಮಾಧವ ಭಟ್
ಮಾರ್ಗಶೀರ್ಷ - ಅಮಾವಾಸ್ಯಾ
ಬೆಂಗಳೂರು.

No comments:

Post a Comment