Friday, 25 January 2019

SiddagangaShree

ಸಿಧ್ಧಗಂಗಾ ಶ್ರೀಬದಿಕುವುದಲ್ಲಬಾಳುವುದು ಹೇಗೆ ಎಂದು ತೋರಿಸಿದ ಮಹಾತ್ಮ
 "ಜಾತಸ್ಯ ಮರಣಂ ಧ್ರುವಂಎನ್ನುತ್ತದೆ ಭಗವದ್ಗೀತೆ. 'ಹುಟ್ಟಿ'ಗೆ 'ಸಾವುಖಚಿತಸಾವು ಬೇಡವೆಂದಾದರೆಹುಟ್ಟೇ ಬೇಡವೆನ್ನಬೇಕು - ಇದು ವೇದಾಂತಸಾವಿನ ನಂತರವೂಬದುಕಬಹುದಾದ್ದು - ಸಿಧ್ಧಗಂಗಾ ಶ್ರೀಗಳ ಜೀವನ.
ಹೌದುಕೆಲವರ ನಿಧನನಮ್ಮನ್ನು ನಿಧಾನವಾಗಿ ಚಿಂತನೆಯತ್ತ ದೂಡುತ್ತದೆಕೆಲವು ನಿಧನದ ಸುದ್ದಿಗಳು ಹೃದಯಾಂತರಾಳದಲ್ಲಿ ಏನೋ ತಳಮಳ ಸೃಷ್ಟಿಸುತ್ತವೆಅದುಅವರ 'ವ್ಯಕ್ತಿತ್ವ' ಮಹಿಮೆಯೇ ಸರಿ.
ಸಿಧ್ಧಗಂಗಾ ಶ್ರೀಗಳ ದರ್ಶನ ಭಾಗ್ಯ ನನಗೆ ದೊರೆತದ್ದು ೨೦೦೭ನೇ ಇಸವಿ ಸೆಪ್ಟೆಂಬರ್ ನಲ್ಲಿನಾನು ಇಂಜನಿಯರಿಂಗ್ ಓದಲು ಅವರದೇ ಸಂಸ್ಥೆಯಾದ 'ಸಿಧ್ಧಗಂಗಾ ತಾಂತ್ರಿಕಮಹಾ ವಿದ್ಯಾಲಯ'ಕ್ಕೆ ಹೋದಾಗತಮ್ಮ ಆಶೀರ್ವಚನದ ಮೂಲಕ ಅವರು ಸ್ವಾಗತಿಸಿದರುಮುಂದೆ ನಾನು ತುಮಕೂರಿನಲ್ಲಿ ಇದ್ದಾಗ ಶ್ರೀಗಳನ್ನು ಅನೇಕ ಬಾರಿನೋಡಿದ್ದೇನೆಮಠಕ್ಕೂ ಅನೇಕ ಬಾರಿ ಹೋಗಿದ್ದೇನೆಅವರ ಕರ್ಮಯೋಗದ ಫಲವನ್ನು ನಾವು ಶ್ರೀಮಠದಲ್ಲಿ ಕಾಣಬಹುದುಸಾವಿರಾರು ಮಕ್ಕಳಿಗೆ ನಿತ್ಯವೂ ತ್ರಿವಿಧದಾಸೋಹವೀವ ಪುಣ್ಯ ಕ್ಷೇತ್ರವದುಇಂತಹ ಒಂದು ಕಾಯಕ ಕುಠೀರವನ್ನು ಕಟ್ಟಿ ಬೆಳೆಸಿದವರು ಇದೆ ನೆಡೆದಾಡುವ ದೇವರೆಂದು ಪೂಜಿಸಲ್ಪಡುವ ಸಿಧ್ಧಗಂಗೆಯ ಶ್ರೀಗಳುಶಿಕ್ಷಣದ ಬಗೆಗಿನ ಅವರ ಕಾಳಜಿ ಅಪಾರ - ಅದರ ಫಲವೇಮಠವು ನೆಡೆಸುತ್ತಿರುವ ಹತ್ತಾರು ಶಾಲಾ-ಕಾಲೇಜುಗಳುಸಂಸ್ಕೃತ-ವೇದ ಪಾಠಶಾಲೆಗಳಿಂದ ಹಿಡಿದು,ಇಂಜನಿಯರಿಂಗ್ ವರೆಗೆಪ್ರಾಥಮಿಕ ಹಂತದಿಂದ ಹಿಡಿದುಸ್ನಾತಕೋತ್ತರ ಪದವಿಯ ವರೆಗೆ ಇದು ವ್ಯಾಪಿಸಿದೆಹೀಗೆನನಗೂ ಕೂಡ,  ಅವರ ಸಂಸ್ಥೆಯಲ್ಲಿ ಪದವಿ ಪಡೆದಬಗ್ಗೆ ಅತೀವ ಹೆಮ್ಮೆ ಇದೆ.
"ಸಿಧ್ಧಗಂಗಾಎಂಬ ನಾಲ್ಕಕ್ಷರದ ಶಬ್ದವನ್ನು ನಾಲ್ಕೂ ದಿಕ್ಕುಗಳಲ್ಲಿ ಪಸರಿಸಿದ ಕೀರ್ತಿ ಶ್ರೀಗಳದ್ದುಅದನ್ನೇಮಾಜಿ ಪ್ರಧಾನಿ ಅಟಲ್ ಜೀ ಯವರು "ಉತ್ತರ್ ಮೇ ಗಂಗಾದಕ್ಷಿಣ್ ಮೇ ಸಿಧ್ಧಗಂಗಾಎಂದದ್ದು.
ಎಲ್ಲರೂ ಬದುಕುತ್ತಾರೆಸಾಯುವವರೆಗೂ ಬದುಕುತ್ತಾರೆಆದರೆಸಿಧ್ಧಗಂಗಾ ಶ್ರೀಗಳು ಕೇವಲ ಬದುಕದೇಸಾರ್ಥಕ "ಬಾಳ್ವೆನೆಡೆಸಿದರುಅವರ ಜೀವನಾದರ್ಶಗಳುನಮಗೆದಾರಿದೀಪವಾಗಬೇಕಿದೆ. "ಪರೋಪಕಾರಾರ್ಥಮಿದಂ ಶರೀರಂಎಂಬ ಮಾತಿನ ಸಾಕಾರ ರೂಪ ಅವರುಮಕ್ಕಳಿಗಾಗಿಮಠಕ್ಕಾಗಿಸಮಾಜಕ್ಕಾಗಿರಾಷ್ಟ್ರಕ್ಕಾಗಿ ತಮ್ಮಜೀವನವನ್ನೇ ಮುಡುಪಾಗಿಟ್ಟ ಮಹಾತ್ಮ ಅವರು.
ಶ್ರೀಗಳ ಅಗಲಿಕೆ ಸಮಸ್ತ ನಾಡಿಗೆ ಸೂತಕ ಛಾಯೆಯನ್ನು ತರಿಸಿದೆಅವರ ಆದರ್ಶಗಳನ್ನು ನೆನೆಸಿಕೊಂಡು ಅವರಿಗೆ ಶ್ರದ್ಧಾಂಜಲಿ ಅರ್ಪಿಸೋಣಭಗವಂತ ಅವರ ಆತ್ಮಕ್ಕೆ ಚಿರಶಾಂತಿಯನ್ನು ದಯಪಾಲಿಸಲಿಓಂ ಶಾಂತಿ.
ಕೊನೆಯ ಮಾತು: "ಭಾರತ ರತ್ನಪ್ರಶಸ್ತಿಸಿಧ್ಧಗಂಗಾ ಶ್ರೀಗಳ ಹೆಸರಿನ ಹಿಂದೆ ತನ್ನ ಸ್ಥಾನವನ್ನು ಪಡೆಯಲು ವಿಫಲವಾದದ್ದುಅದರ ದುರಾದೃಷ್ಟವೇ ಸರಿ - ಅಲ್ಲವೇ??.

.ನಾ.ಮಾಧವ ಭಟ್
ಪುಷ್ಯ-ಕೃಷ್ಣ-ಪ್ರತಿಪತ್೨೨-೦೧-೨೦೧೯.
ಬೆಂಗಳೂರು.

Learnings from my daughter

ನನ್ನ ಆರು ತಿಂಗಳ ಮಗಳಿಂದ ನಾನು ಕಲಿತ ಆರು ಅಂಶಗಳು.

ನನ್ನ ಮಗಳು 'ವಿದಿತಾಇಂದಿಗೆ ಆರು ತಿಂಗಳು ಪೂರೈಸಿದ್ದಾಳೆ....!! ಚಿಕ್ಕ ಮಕ್ಕಳೇ ಚೆಂದಅವು ನಮ್ಮ ಜೊತೆಗಿದ್ದರೂ ಅವುಗಳದೇ ಲೋಕದಲ್ಲಿ ಇರುತ್ತವೆ. 'ಮಕ್ಕಳ ಲೋಕನಾವು ಈಗ ಮರಳಿ ಹೋಗಲಾಗದ ಒಂದು ಲೋಕಮಕ್ಕಳನ್ನು ಬೆಳೆಸುವುದು ಒಂದು ಜವಾಬ್ದಾರಿಯಾದರೂಅವುಗಳ ಬೆಳವಣಿಗೆಯನ್ನು ಗಮನಿಸುವುದೇ ಒಂದು ಆನಂದಮಕ್ಕಳು ದಿನದಿಂದ ದಿನಕ್ಕೆ ಹೊಸತನ್ನು ಕಲಿಯುತ್ತವೆ ಮತ್ತು ಬೆಳೆಯುತ್ತವೆನನ್ನ ಮಗಳೂ ಬೆಳೆಯುತ್ತಿದ್ದಾಳೆ - ಈಗ ಆರು ತಿಂಗಳು ಪೂರೈಸಿದ್ದಾಳೆ...! ನಾವು ಅವಳಬೆಳವಣಿಗೆಯನ್ನು ಸಂತೋಷಿಸುತ್ತಿದ್ದೇವೆಮಗಳಿಗೆ ಆರು ತಿಂಗಳು ತುಂಬಿದ  ಸಂದರ್ಭದಲ್ಲಿ ನಾನು ಗಮನಿಸಿದ ಆರು ಅಂಶಗಳನ್ನು ಹಂಚಿಕೊಳ್ಳುತ್ತೇನೆ.
ನಗು:- 'ಸಂತೋಷಮಾನವನಿಗಾಗುವ ಒಂದು ಅನುಭವ - 'ನಗುಅದರ ಅಭಿವ್ಯಕ್ತಿಮಕ್ಕಳಲ್ಲಿ ನಗು ಅತ್ಯಂತ ಸಹಜವಾಗಿರುತ್ತದೆದೊಡ್ಡವರಲ್ಲಿ ನಗು ಯಾವಾಗಲು'ಸಹಜಎಂದೆನಿಸುವುದಿಲ್ಲನಾವು ಹಲವು ಬಾರಿ ನಗುವನ್ನು ಹಿಡಿದಿಟ್ಟುಕೊಳ್ಳುತ್ತೇವೆ ಅಥವಾ ಸುಮ್ಮನೆ ಒಂದು 'ಸ್ಮೈಲ್ಕೊಡುತ್ತೇವೆದೊಡ್ಡವರ ನಗು ಅವರಿಗಾದಅನುಭವವಾಗಿರದೆ ಎದುರು ನಿಂತಿರುವ ವ್ಯಕ್ತಿಗೆ ಕೊಡುವ ಪ್ರತಿಕ್ರಿಯೆಯಾಗಿರುವ ಸಂದರ್ಭವೇ ಹೆಚ್ಚು.
 ಅಳು:- 'ಅಳುಕೂಡ ಒಂದು ಅಭಿವ್ಯಕ್ತಿಮಕ್ಕಳು ಅಳುವನ್ನು ಒಂದು ಸಂಪರ್ಕ ಸಾಧನವನ್ನಾಗಿ ಬಳಸುತ್ತವೆಹಾಲು ಬೇಕಾದರೂ ಅಳುತ್ತವೆನಿದ್ದೆ ಬಂದರೂ ಅಳುತ್ತವೆಹೆದರಿಕೆಯಾದರೂ ಅಳುತ್ತವೆ ಅಳುವಿನ ಮರ್ಮವನ್ನು ಅರಿಯಬೇಕಾದ್ದು ಪೋಷಕರ ಕರ್ತವ್ಯ..! ಇಲ್ಲಿ ಇನ್ನೂ ಒಂದು ಅಂಶವನ್ನು ಗಮನಿಸಬಹುದುಮಕ್ಕಳುಜೋರಾಗಿ ನಗುವುದಿಲ್ಲಆದರೆ ಜೋರಾಗಿ ಅಳುತ್ತವೆಇದು ಮನುಷ್ಯನ ಸಹಜ ಸ್ವಭಾವವೆನಿಸುತ್ತದೆ - ಮನುಷ್ಯ ತನ್ನ ಸಂತೋಷಕ್ಕಿಂತ ದುಖ್ಖದ 'ವ್ಯಾಖ್ಯಾನಮಾಡುವುದೇಹೆಚ್ಚು. ...! ಅಲ್ಲವೇ?!
 ನಿದ್ದೆ:- ನಿದ್ದೆ ಮಾನವನ ದೇಹದ ಆವಶ್ಯಕತೆಹಾಗಾಗಿ ಅವಶ್ಯವಿರುವಷ್ಟೇ ನಿದ್ದೆ ಮಾಡಬೇಕುಬೇರೆ ಏನೂ ಕೆಲಸವಿಲ್ಲದ ಮಕ್ಕಳು ಹೆಚ್ಚು ನಿದ್ದೆ ಮಾಡಿದರೂ ಕೂಡನಿದ್ದೆ ಬಾರದೇ ಇದ್ದಾಗ ಹಾಸಿಗೆಯಲ್ಲಿ ಇರಲು ಇಷ್ಟಪಡುವುದಿಲ್ಲನಿದ್ದೆ ಬಾರದೆ ಇದ್ದಾಗ - ಹಾಸಿಗೆಯಲ್ಲೇ ನಗುತ್ತವೆಅಳುತ್ತವೆಆಟವಾಡುತ್ತವೆಆದರೆ ದೊಡ್ಡವರ ಹಾಗೆನಿದ್ದೆಯ 'ನಾಟಕ'ವಾಡುವುದಿಲ್ಲ...!
 ವಸ್ತುಗಳ ಮೌಲ್ಯ:- ವಸ್ತುಗಳ 'ಮೌಲ್ಯ'ವನ್ನು ಅವುಗಳ ದುಡ್ಡಿನ 'ಬೆಲೆ'ಯಿಂದ ಅಳೆಯುವ ಸ್ವಭಾವ ದೊಡ್ಡವರದುಮಕ್ಕಳು ಹಾಗಲ್ಲಅವು  ವಸ್ತುತನಗೆಷ್ಟರಮಟ್ಟಿಗೆ ಪ್ರಯೋಜನವೆಂದು ನೋಡುತ್ತವೆಹತ್ತು ರೂಪಾಯಿಯ ಆಟದ ಸಾಮಾನು ಸಾವಿರ ರೂಪಾಯಿಯ ಆಟದ ಸಾಮನಿಗಿಂತ ಹೆಚ್ಚು ಹಿಡಿಸಬಹುದು.
 ಗ್ರಹಣಶೀಲತೆ:- ಮಕ್ಕಳು ನಿತ್ಯವೂ ಬೆಳೆಯುತ್ತವೆ ಏಕೆಂದರೆ ಅವು ಹೊಸತನ್ನು ಗಮನಿಸುತ್ತವೆ ಮತ್ತು ಗ್ರಹಿಸುತ್ತವೆನಾವು ದೊಡ್ಡವರು - ಅನೇಕ ಸಂಗತಿಗಳನ್ನುನೋಡುತ್ತೇವೆಆದರೆ ಗ್ರಹಿಸುವುದಿಲ್ಲಹಾಗಾಗಿಯೇ ದೊಡ್ಡವರ ಬೆಳವಣಿಗೆ ಅನೇಕರಲ್ಲಿ 'ವಯಸ್ಸಿನಬೆಳವಣಿಗೆಗಷ್ಟೇ ಸೀಮಿತ...! 
ಹಸಿವಾದರಷ್ಟೇ ಆಹಾರ:- ಮಕ್ಕಳು ತಮಗೆ ಹಸಿವಾದರಷ್ಟೇ ಹಾಲು ಕುಡಿಯುತ್ತವೆಹಸಿವಿಲ್ಲವಾದರೆ ಸುತಾರಾಂ ಮುಟ್ಟುವುದಿಲ್ಲಆದರೆ ದೊಡ್ಡವರಿಗೆ ಆಹಾರಸೇವಿಸಲು ಹಸಿವೇ ಆಗಬೇಕೆಂದಿಲ್ಲ..! ಅನೇಕ ಬಾರಿ ಸ್ನೇಹಿತರುಸಹೋದ್ಯೋಗಿಗಳು ಕರೆದರೆಂದು ಹೋಟೆಲ್ಲಿಗೆ ಹೋಗಿ ಗಡದ್ದಾಗಿ ತಿನ್ನುತ್ತೇವೆಊಟದಸಮಯವಾಯಿತೆಂದರೆ ಊಟದ ಶಾಸ್ತ್ರ ಮುಗಿಸಿಬಿಡುತ್ತೇವೆ..! ನಮ್ಮ ನಿತ್ಯದ ಊಟದ ಸಮಯದಲ್ಲಿ 'ಮೀಟಿಂಗ್ಇದೆಯಾದರೆ ಒಂದು ಘಂಟೆ ಮೊದಲೇ ಊಟಮುಗಿಸುತ್ತೇವೆ..! ಒಟ್ಟಿನಲ್ಲಿ ಊಟ ಮಾಡುತ್ತೇವೆ...!!
 ಮುಗಿಸುವ ಮುನ್ನನಾವು ಕೂಡ ಮಗುವಾಗಿದ್ದಾಗ 'ಸಹಜ ಧರ್ಮ'ವನ್ನು ಪಾಲಿಸುತ್ತಿದ್ದೆವುದೊಡ್ಡವರಾಗುತ್ತಾ 'ಅಸಹಜತೆಕಡೆಗೆ ಹೋಗುತ್ತೇವೆಅಥವಾ ಅಸಹಜತೆ ಕಡೆಗೆಹೋಗುವುದನ್ನೇ 'ದೊಡ್ಡವರಾಗುವುದುಎನ್ನುತ್ತೇವೆಒಟ್ಟಿನಲ್ಲಿ ಸಹಜ ಜೀವನ ಮಕ್ಕಳಿಂದ ಕಲಿಯಬೇಕಾದ ಪಾಠಪುನಃ ಮಗುವಾಗಿ ಮಕ್ಕಳ ಲೋಕಕ್ಕೆ ಹೋಗಲುಆಗದಿದ್ದರೂಸಹಜತೆಯ ಕಡೆಗೆ ಹೋಗಲು ಪ್ರಯತ್ನಿಸಬೇಕಾಗಿದೆ.
 .ನಾ.ಮಾಧವ ಭಟ್
ಪುಷ್ಯ-ಶುಕ್ಲ-ಏಕಾದಶೀಗುರುವಾರ.
೧೭-೦೧-೨೦೧೯.

National Youth Day

ಉತ್ತಿಷ್ಠ ಯುವ ಭಾರತ : ರಾಷ್ಟ್ರೀಯ ಯುವ ದಿನ - ಜನವರಿ ೧೨

ವಿಶ್ವ ವಿಜೇತ ಯುವ ಸನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಭಾರತ 'ರಾಷ್ಟ್ರೀಯ ಯುವ ದಿನ'ವನ್ನಾಗಿ ಸಂಭ್ರಮಿಸುತ್ತಿದೆ (೧೯೮೫ರಿಂದ). ಇಂದು ಭಾರತದಜನಸಂಖ್ಯೆಯಲ್ಲಿ ೫೦%ಕ್ಕೂ ಹೆಚ್ಚು ಭಾಗ ೨೫ ವರ್ಷಗಳಿಗಿಂತ ಚಿಕ್ಕವರು ಮತ್ತು ೬೫%ಕ್ಕೂ ಹೆಚ್ಚು ಭಾಗ ೩೫ ವರ್ಷಗಳನ್ನು ದಾಟದವರುಅಧ್ಯಯನಗಳ ಪ್ರಕಾರ ೨೦೨೦ರವೇಳೆಗೆ ಭಾರತೀಯರ ಸರಾಸರಿ ವಯಸ್ಸು ೨೯ಇದು ಇತರ ದೇಶಗಳಿಗಿಂತ ಬಹು ಕಡಿಮೆಹಾಗಾಗಿಯೇ ಭಾರತ ನಿಜವಾಗಿಯೂ ಒಂದು 'ಯುವ ರಾಷ್ಟ್ರ'. ಹೀಗೆ ಜನಸಂಖ್ಯೆಒಂದು ಶಾಪವಾಗದೆ ನಮ್ಮ ಸಂಪನ್ಮೂಲವಾಗಿ ನಮ್ಮನ್ನು ಯುವ ರಾಷ್ಟ್ರವನ್ನಾಗಿ ಮಾಡಿದೆಭಾರತೀಯ ಯುವಕರು ತಮ್ಮ ಜೀವನವನ್ನು ಕಟ್ಟಿಕೊಳ್ಳುವುದರ ಜೊತೆಜೊತೆಗೆ ರಾಷ್ಟ್ರವನ್ನು ಕಟ್ಟಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆಸರ್ಕಾರಗಳ ಅನೇಕ ಯೋಜನೆಗಳ ಪರಿಣಾಮವಾಗಿ ಶಿಕ್ಷಣಆಹಾರವಸತಿಉದ್ಯೋಗಆರೋಗ್ಯ ಹೀಗೆಅನೇಕ ಭಾಗಗಳಲ್ಲಿ ಭಾರತ ಸುಧಾರಿಸಿದೆಆದರೂ ಭ್ರಷ್ಟಾಚಾರನಿರುದ್ಯೋಗಸ್ವಜನ ಪಕ್ಷಪಾತ ಹೀಗೆ ಅನೇಕ ಸಮಸ್ಯೆಗಳು ಇಂದಿಗೂ ಇವೆ ಸಮಸ್ಯೆಗಳಿಗೆ ಸರ್ಕಾರಗಳುಎಂದಿಗೂ ಪರಿಹಾರವನ್ನು ಕೊಡಲಾರವುಏಕೆಂದರೆ, 'ಸರ್ಕಾರಎಂಬುದು ಒಂದು ವ್ಯವಸ್ಥೆವ್ಯವಸ್ಥೆಗಳು ವ್ಯಕ್ತಿಗಳಿಂದ ನಿರ್ಮಾಣವಾಗುತ್ತವೆಹಾಗಾಗಿ ವ್ಯಕ್ತಿ ಸರಿಯಾದರೆಮಾತ್ರ ವ್ಯವಸ್ಥೆ ಸರಿಯಾಗುತ್ತದೆಇಂದಿನ ಯುವಕರು  ದಿಶೆಯಲ್ಲಿ ಚಿಂತಿಸಬೇಕಾಗಿದೆ ಹಿನ್ನೆಲೆಯಲ್ಲಿ ಯುವ ಭಾರತೀಯರು ಚಿಂತಿಸಬೇಕಾದ ಅಂಶಗಳು ಇಲ್ಲಿವೆ:
ಒಬ್ಬ ವ್ಯಕ್ತಿಯಾಗಿ:
ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು.
ಕೇವಲ ಫೇಸ್ ಬುಕ್ವಾಟ್ಸಾಪ್ಆನ್ಲೈನ್ ಪೋರ್ಟಲ್ ಗಳಿಗೆ ಮಾರಿಹೋಗದೆಸಮಯವನ್ನು ಸದುಪಯೋಗಪಡಿಸಿಕೊಳ್ಳುವುದು.
ರಾಷ್ಟ್ರೀಯ ಚಿಂತನೆಸುದ್ದಿ ಗೋಷ್ಠಿಗಳಲ್ಲಿ ಭಾಗವಹಿಸುವಿದು.
ಸಂಸ್ಕೃತಿಆಚರಣೆಗಳನ್ನು ಹಿಂದಿನವರಿಂದ ಮುಂದಿನವರಿಗೆ ದಾಟಿಸುವಿದು.

ಒಬ್ಬ ಪ್ರಜೆಯಾಗಿ:
ಸರ್ಕಾರಗಳ ಯೋಜನೆಗಳ ಬಗ್ಗೆ ಚರ್ಚಿಯುವುದು.
ತಾತ್ಕಾಲಿಕ ಯೋಜನೆಗಳಿಗಿಂತದೀರ್ಘಕಾಲಿಕ ಯೋಜನೆಗಳಿಗಾಗಿ ಸರ್ಕಾರಗಳನ್ನು ಆಗ್ರಹಿಸುವುದು.
ಭ್ರಷ್ಟಾಚಾರವನ್ನು ದೈನಂದಿನ ವ್ಯವಹಾರದಲ್ಲಿ ತಡೆಹಿಡಿಯುವುದು.
ನಾಡು-ನುಡಿ-ಭಾಷೆ ಇತ್ಯಾದಿ ಅಂಶಗಳು ದೇಶದ ವಿಭಜನೆಯ ವಿಷಯಗಳಾಗದೇದೇಶದ ಐಕ್ಯತೆಯ ವಿಷಯಗಳೆಂದು ಅರಿತುಕೊಳ್ಳುವುದು.
ರಾಷ್ಟ್ರ ವಿರೋಧಿ ಪಟ್ಟಭದ್ರ ಹಿತಾಸಕ್ತಿಗಳನ್ನು ವಿರೋಧಿಸುವುದು.

ಹೀಗೆ ಯುವ ಭಾರತದ ಭಾಗವಾದ ನಾವು ಕನಸಿನಲ್ಲೂ ಭಾರತವನ್ನು ಕಾಣಬೇಕಾಗಿದೆ ದಿಶೆಯಲ್ಲಿ ನಾವು ಯುವದಿನವನ್ನು ಸಂಭ್ರಮಿಸೋಣ - ಭಾರತವನ್ನುವಿಶ್ವಗುರುವನ್ನಾಗಿ ಮಾಡೋಣ.

.ನಾ.ಮಾಧವ ಭಟ್
ಪುಷ್ಯ-ಶುಕ್ಲ-ಷಷ್ಠಿಶನಿವಾರ.
೧೨-೦೧-೨೦೧೯

Current politics in my view

ನಾ ಕಂಡಂತೆ ಇಂದಿನ ರಾಜಕಾರಣ :
ಶುರುಮಾಡುವ ಮೊದಲು: "ಕಮಲಕೆಸರಿನಿಂದ ಮೇಲೇಳುವ ಬದಲುಕೆಸರಿನೊಳಕ್ಕೇ ಹೊರಟಿದೆ...!

ತೆನೆಹೊತ್ತ ನಾರಿತೆನೆಯನ್ನು ಕೆಳಗಿಟ್ಟು ತಿಂಗಳುಗಳೇ ಕಳೆದಿವೆ ತೆನೆಹೊತ್ತ ನಾರಿಪ್ರಾದೇಶಿಕವಾದ ತನ್ನ ಹೊರೆಯನ್ನು ರಾಷ್ಟ್ರೀಯವಾದ "ಕೈ"ಗಳಿಗೆ ಕೊಟ್ಟಿದೆಇತ್ತಕರ್ನಾಟಕದ ಕಮಲ 'ಗುರುಗ್ರಾಮ'ದಲ್ಲಿ ಮತ್ತೊಮ್ಮೆ ಅರಳುವ ಪ್ರಯತ್ನ ಮಾಡಿದೆಇಲ್ಲಿನ "ಕೈ" ಕಾಲುಗಳು ರೆಸಾರ್ಟ್ ನತ್ತ ಹೆಜ್ಜೆ ಹಾಕಿವೆತೆನೆ ಕೆಳಗಿಟ್ಟ ನಾರಿಯಂತೂತನ್ನ ಪಾಲಿನ ರೆಸಾರ್ಟ್ ಭಾಗ್ಯ ಯಾವಾಗ ಬರುತ್ತದೋ ಎಂದು ಕಾದು ಕುಳಿತಿದೆಎಂದಿನಂತೆ, 'ಕಮಲ' ಬೆಳೆಗಾರರು 'ಸ್ಥಳೀಯ ಕೃಷಿ'ಯನ್ನು ಮರೆತು, 'ರಾಷ್ಟ್ರೀಯಕೃಷಿ' ಬಗ್ಗೆ ಕನಸು ಕಾಣುತ್ತಿದ್ದಾರೆಮತ್ತೊಂದೆಡೆಕಾಲಿಲ್ಲದ 'ಕೈ'ಗಳು, 'ಆನೆ'ಯದೋ, 'ಸೈಕಲ್'ದೋ ಸಹಾಯ ಕೇಳಿ 'ಮಹಾಘಟಎಂಬ ಬಂಧನದಲ್ಲಿ ಸಿಲುಕಿದೆತೆನೆಹೊತ್ತ ನಾರಿಯಂತೂ ಇಲ್ಲಿನ ಬರಗಾಲ ಮರೆತು ಕೋಲ್ಕತ್ತಾದಲ್ಲಿ ರಚಿತವಾಗುತ್ತಿರುವ 'ಮಹಾ ಘಟ'ಕ್ಕೆ ತನ್ನದೂ ಒಂದು ಚಂಬು ನೀರು ಹಾಕಿ ಬಂದಿದೆ.
'ಕಮಲ' ಬೆಳೆಗಾರರು ಒಬ್ಬ 'ಮೋಡಿಮಾಡುವ ಮಾಂತ್ರಿಕನನ್ನೋ , ಇಲ್ಲ ಇನ್ನೊಬ್ಬ 'ಚಾಣಕ್ಯ'ನನ್ನೋ ನಂಬಿ ಕುಳಿತಿದ್ದಾರೆಇನ್ನು, "ಕೈ"ಗಳಿಗಂತೂತನ್ನ ತಲೆಯ ಮೇಲೆ"ರಾಹು"ವೇ ಕುಳಿತಂತಾಗಿದೆಒಂದೇ ಕುಟುಂಬದಿಂದ ಪೋಷಿಸಲ್ಪಡುತ್ತಿರುವ 'ತೆನೆಹೊತ್ತನಾರಿ ತಾನು 'ಕೈಹಿಡಿದವರಿಂದ ಕಷ್ಟ ಪಡುತ್ತಿದ್ದಾಳೆ....!
 ಒಟ್ಟಿನಲ್ಲಿ ಕನ್ನಡಿಗ "ಕನ್ಫ್ಯೂಸ್" ಆಗಿದ್ದರೆ, ಭಾರತೀಯ "ಭ್ರಾಂತ"ನಾಗಿದ್ದಾನೆ....!!!
 .ನಾ.ಮಾಧವ ಭಟ್